ಕರೋನಾ ಕೊನೆ ? ಇದನ್ನು ಓದಿ - ಜ್ಯೋತಿಷಿ ದಿವ್ಯಶ್ರೀ ಅವರ ಸಲಹೆಗಳು
ಕಳೆದ ತಿಂಗಳು ನನ್ನ ಗ್ರಹ ಗೋಚಾರ ತಿಳಿಯುವಿಕೆಗೆಅನುಗುಣವಾಗಿ, ಮಾರ್ಚ್ 22 ರಿಂದ ಏಪ್ರಿಲ್ 4 ರವರೆಗೆ, ಹರಡುವಿಕೆಯು ತುಂಬಾ ತೀವ್ರವಾಗಿತ್ತು. ಇದರ ನಂತರದ ಪರಿಣಾಮಗಳನ್ನು ನಾವು ಇನ್ನೂ ನೋಡುತ್ತಿದ್ದೇವೆ. ಇದು ವಿಶಿಷ್ಟ ಗುಣಕ ವೈರಸ್ ಆಗಿರುವುದರಿಂದ, ಪ್ರಕರಣಗಳು ಶೀಘ್ರದಲ್ಲೇ ಗುಣಿಸುತ್ತಿವೆ.
ಏಪ್ರಿಲ್ 14 ರಿಂದ, ನಮಗೆ ಸೋಂಕು ಹರಡುವಿಕೆಯಿಂದ ಸ್ವಲ್ಪ ನೆಮ್ಮದಿ ಸಿಗಬಹುದು. ಇದು ನಿರ್ಬಂಧಗಳನ್ನು ಹೇರುವುದರಿಂದ ಸಾಧ್ಯವಾಗುವುದು.
" ಹೇರುವುದು" ಈ ಪದವನ್ನು ಒತ್ತಿ ಹೇಳಬೇಕು. ಎಲ್ಲೋ ನಾವು ಇನ್ನೂ ಹುಡುಗಾಟಿಕೆಯ ಮನೋಭಾವನೆಯಲ್ಲೇ ಇದ್ದೇವೆ ಎನಿಸುತ್ತದೆ.
ಈಗ, ನಿಯಂತ್ರಣಕ್ಕೆ ಬರುತ್ತಿದೆ ಎಂದು ಸುದ್ದಿ ಬಂದ ಕೂಡಲೇ ನಾವು , ಸ್ವಲ್ಪ ಅತಿ ಬೇಗನೆ ಶುಭ ಆಚರಿಸುವ ಮನಸ್ಥಿತಿಗೆ ತಲುಪಿಬಿಡುತ್ತೇವೆ . ಇಲ್ಲಿ ಏನು ಹೇಗೆ ನಡೆಯುವುದು ಎಂದು ತಿಳಿಯೋಣ ಬನ್ನಿ.
ಮೇ ತಿಂಗಳಲ್ಲಿ, ಬುಧ, ಶುಕ್ರ ಹಾಗೂ ರವಿ ವೃಷಭವನ್ನು ಪ್ರವೇಶ ಮಾಡುತ್ತಾರೆ. ಮೊದಲು 1ನೇ ತಾರೀಖು ಬುಧ, 4ನೇ ತಾರೀಖು ಶುಕ್ರ, 14ನೇ ತರೀಖು ರವಿ ರಾಹುವಿನ ಸಮೀಪಕ್ಕೆ ಬರುತ್ತಾರೆ.
ಬುಧ ವೃಷಭದಲ್ಲಿ ಚರಿಸುವಾಗ , ಬ್ಯಾಂಕುಗಳು ಮತ್ತು ಸೈಬರ್ ಕೆಫೆಗಳಲ್ಲಿ ಸೋಂಕು ಹರಡುವ ಸಾಧ್ಯತೆ ಇದೆ. ಮಕ್ಕಳು ಮತ್ತು ಹದಿಹರೆಯದವರಲ್ಲಿ ವೇಗವಾಗಿ ಸೋಂಕು ವಿಸ್ತೃತವಾಗುವ ಸಾಧ್ಯತೆ ಅತಿ ಹೆಚ್ಚು.
ಅಥವಾ ಸೋಂಕು ಈಗಿಂದಲೇ ತಾಕಿದ್ದು, ಆಮೇಲೆ ಬೆಳಕಿಗೆ ಬರುವ ಸಾಧ್ಯತೆ ಕೂಡಾ ಇದೆ. ಅಥವಾ ಆಗ ಸೋಕಿನ ಸಂಖ್ಯೆಗಳನ್ನು ಬಹಿರಂಗಪಡಿಸಬಹುದು. ಆದ್ದರಿಂದ, ನಮ್ಮನ್ನು ರಕ್ಷಿಸಿಕೊಳ್ಳಲು ನಮಗೆ ಇನ್ನೂ ಸಮಯವಿದೆ.
ಮೇ ತಿಂಗಳು ಬಹಳ ಪ್ರಮುಖವಾದ ಬೆಳವಣಿಗೆಗಳನ್ನು ಕಾಣುತ್ತದೆ. ಎಲ್ಲಾ ಲಕ್ಷಣರಹಿತ ಕೇಸ್ ಗಳೂ ಬಹಿರಂಗವಾಗುತ್ತವೆ. ಅದು ಕೊರೋನಾದ ಕೊನೆಯ ಧಾಳಿ ಅಗಿರುತ್ತದೆ. ಒಳ್ಳೆಯ ಸುದ್ದಿ ಮತ್ತು ಹಾಗೆ ಎಚ್ಚರಿಕೆ ಕೂಡಾ ಇದೆ.
ಒಳ್ಳೆಯ ಸುದ್ದಿ ರವಿ ವೃಷಭದಲ್ಲಿ ರಾಹುವನ್ನು ದುರ್ಬಲಗೊಳಿಸುತ್ತಾನೆ. ಆದ್ದರಿಂದ, ನಾವು ಹರಡುವಿಕೆಯಲ್ಲಿ ನಿಯಂತ್ರಣವನ್ನು ಕಾಣಬಹುದು.
ಆದರೆ ನಾವು ಎಚ್ಚರಿಕೆ ವಹಿಸದಿದ್ದಲ್ಲಿ ಇನ್ನೊಂದು ಲಾಕ್ ಡೌನ್ ಖಂಡಿತಾ ಸಾಧ್ಯವಿದೆ.
ಶುಕ್ರ ರಾಹು ಸ್ನೇಹಿತರಾಗಿದ್ದು, ವೃಷಭದಲ್ಲಿ ಜೊತೆಗೂಡುತ್ತಾರೆ. ಈಗ
ಸೆಲೆಬ್ರಿಟಿಗಳಲ್ಲಿ ಹರಡುವಿಕೆ ಉಂಟಾಗುತ್ತದೆ ಮತ್ತು ಕಲೆ ಮತ್ತು ಸೌಂದರ್ಯ ಉದ್ಯಮದ ಜನರು ಈ ಸೋಂಕಿನ ಅಲೆಗೆ ತುತ್ತಾಗಬಹುದು.
ಅಥವಾ ಇವರು ಮುಂದೆ ಬಂದು ಇದರ ನಿಯಂತ್ರಣದಲ್ಲಿ ಹೆಚ್ಚಿನ ಹೊಣೆಗಾರಿಕೆ ವಹಿಸಬಹುದು.
ಈ ಸಮಯದಲ್ಲಿ ಮಹಿಳೆಯರು ಹೆಚ್ಚು ಸೋಂಕಿಗೆ ಒಳಗಾಗಬಹುದು. ಆದ್ದರಿಂದ, ಮಾಲ್ ಗಳು, ಚಿತ್ರಮಂದಿರಗಳು, ಮಹಿಳೆಯರ ಬ್ಯೂಟಿ ಸಲೂನ್ ಗಳು ಮತ್ತು ಯುನಿಸೆಕ್ಸ್ ಸಲೂನ್ ಗಳು ಸಾಂಕ್ರಾಮಿಕ ಹರಡುವಿಕೆಯ ತಾಣಗಳಾಗಿ ಮಾರ್ಪಡಬಹುದು.
ಅಕ್ಷಯ ತೃತೀಯ ಮೇ ತಿಂಗಳಲ್ಲಿ ಬರುವುದು. ಕಾಳಜಿಯನ್ನು ನಿರ್ವಹಿಸದಿದ್ದರೆ ಈ ವರ್ಷ ಇದು ದುಬಾರಿಯಾಗಿ ಪರಿಣಮಿಸುತ್ತದೆ. ಈ ಸಮಯದಲ್ಲಿ ಚಿನ್ನ ಖರೀದಿಸಲು ಅಂಗಡಿಗಳಿಗೆ ಹೋಗದೇ, ಮನೆಯಲ್ಲೇ ಇರುವುದು ಬಹಳ ಒಳಿತು.
ಮೇ 14 ರಂದು ರವಿ ವೃಷಭವನ್ನು ಪ್ರವೇಷಿಸುತ್ತಾನೆ. ಈ ಸಾಂಕ್ರಾಮಿಕ ಪ್ರಸಂಗಕ್ಕೆ ಇದು ಬಹಳ ಮುಖ್ಯವಾದ ತಿರುವು. ಒಂದು ಪ್ರಮುಖ ನಿಯಂತ್ರಣ ನಿರ್ಧಾರ ಅಥವಾ ದೊಡ್ಡ ಕ್ರಮವೊಂದು ಈಗ ಸೋಂಕು ಹರಡುವುದನ್ನುತಡೆಯಲು ಅನುಕೂಲ್ಕಾರಿಯಾಗುವುದು. ನಾವು ಆದೇಶಗಳನ್ನು ಪಾಲಿಸದಿದ್ದರೆ, ಅದು ಲಾಕ್ ಡೌನ್ ಆಗಿರಬಹುದು. ನಾವು ಉತ್ತಮವಾಗಿ ನಿಯಮ ಪಾಲಿಸರೆ ನಾವು ಈ ಸಾಂಕ್ರಾಮಿಕ ರೋಗದ ಮೈಲಿಗಲ್ಲು ನಿರ್ಧಾರ ಅಥವಾ ಪರಿಹಾರವನ್ನು ಈಗ ಕಾಣಬಹುದು.
ಮೇ ತಿಂಗಳಲ್ಲಿ ದೊಡ್ಡ ಡ್ರಾಮಾ ಆಗುವ ಸಾಧ್ಯತೆ ಇದೆ. ದೊಡ್ಡನಿರ್ಧಾರಗಳು ಬರಲಿವೆ. , ಅದು ಶೀಘ್ರದಲ್ಲೇ ಕರೋನದ ಭಯವನ್ನು ಕೊನೆಗೊಳಿಸುವತ್ತ ನಮ್ಮನ್ನು ಕರೆದೊಯ್ಯುತ್ತದೆ. ಸಾಮಾನ್ಯ ರೋಗನಿರೋಧತೆಯತ್ತ ನಾವು ಜೂನ್ ನಿಂದ ಹೆಜ್ಜೆ ಹಾಕಲು ಆರಂಭಿಸಬಹುದು.
ಜೂನ್ 10 ರ ಹೊತ್ತಿಗೆ ನಾವು ನಿಯಂತ್ರಣದಲ್ಲಿ ಹೆಚ್ಚು ಉತ್ತಮವಾಗಿರುತ್ತೇವೆ. ಮತ್ತು ಏಪ್ರಿಲ್ 2022 ರಲ್ಲಿ ಈ ಸಾಂಕ್ರಾಮಿಕ ರೋಗದ ಆರ್ಭಟಕ್ಕೆ ನಾವು END ಅಥವಾ ಕಡಿವಾಣವನ್ನು ಆಶಾದಾಯಕವಾಗಿ ನೋಡಬಹುದು. ಆ ಹೊತ್ತಿಗೆ ನಾವು ಜನರಲ್ಲಿ ಕೋವಿಡ್ ಗೆ ಪ್ರತಿರಕ್ಷೆಯನ್ನು ಬೆಳೆಸಿಕೊಂಡಿರುತ್ತೇವೆ.
" ಗುಡ್ ಬೈ ಕರೋನಾ ಭಯ " ಎನ್ನಬಹುದು !! ಗುಡ್ ಬೈ ಕೊರೋನಾ ಎನ್ನಲು ಸಾಧ್ಯವಿರದೇ ಇರಬಹುದು. ವೈರಸ್ ಉಳಿಯುತ್ತದೆ. ಆದರೆ ನಾವು ಡೆಂಗ್ಯೂ ರೀತಿಯಲ್ಲಿ ಅದನ್ನು ಜಯಿಸಿರುತ್ತೇವೆ.
ಆದ್ದರಿಂದ ಇದು ನಮಗೆ ಜೀವಮಾನದ ಪರ್ಯಂತದ ಪಾಠವಾಗಿದೆ. ಮಾರ್ಚ್ 2022 ರವರೆಗೆ ನಾವು ಸುರಕ್ಷಿತವಾಗಿರಲು ಮರೆಯಲು ಸಾಧ್ಯವಿಲ್ಲ. 2022 ರಲ್ಲಿ ನಾವು ಈ ಭಯವನ್ನು ಕೊನೆಗೊಳಿಸುತ್ತೇವೆ ಎಂದು ನಾನು ಆಶಿಸುತ್ತೇನೆ. ಆದ್ದರಿಂದ ಈಗ, 2022 ರ ಮಾರ್ಚ್ ವರೆಗೆ ನಾವು ಪ್ರತಿದಿನ ಜಾಗರೂಕರಾಗಿದ್ದರೆ, ನಾವು ಕೋವಿಡ್ ಎಂಬ ಈ “ಯುದ್ಧ” ವನ್ನು ಖಂಡಿತಾ ಗೆಲ್ಲುತ್ತೇವೆ.
No comments:
Post a Comment